ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಆ ಕಾರಣದಿಂದಾಗಿ ನಾವು ಈ ದೇಶದಿಂದ ಇನ್ನೊಂದು ದೇಶಕ್ಕೆ ವರ್ಗಾವಣೆ ಅಗೋದು ಸೂಕ್ತವೆಂದು ಆಮೀರ್ ಖಾನ್ ಹೇಳಿದ್ದು ಸರಿಯೋ ತಪ್ಪೋ ಅದು ನಂತರದ ವಿಚಾರ. ಅದಕ್ಕಿಂತ ಮೊದಲು ಇಲ್ಲಿ ಕೆಲವು ಅಪ್ಪಟ ದೇಶಪ್ರೇಮಿಗಳು ಹೇಳಿದ ಮಾತನ್ನು ಗಮನಿಸೋಣ. "ನಿಮಗೆ ತಾಕತ್ತು ಇದ್ದರೆ ಗುಜರಾತಿನಲ್ಲಿ ಬಂದು ಬೀಫ್ ತಿನ್ನಿ ನೋಡೋಣ" - ಅಮಿತ್ ಷಾ "ಕೇರಳದ ಮುಸ್ಲಿಮರು, ಗುಜಾರತ್ ಮತ್ತು ಮುಝಾಪ್ಪರ್ ನಗರದ ಹಿಂಸೆಯನ್ನು ಮರೆಯುವಂತಿಲ್ಲ" - ಪ್ರವೀಣ್ ತೋಗಾಡಿಯ "ಈ ದೇಶದಿಂದ ಮುಸ್ಲಿಮರನ್ನು ಉಚ್ಚಟಿಸುತ್ತೇವೆ" - ಪ್ರವೀಣ್ ತೊಗಾಡಿಯ "ಮುಸ್ಲಿಮರಿಗೆ ಮತದಾನ ಮಾಡುವ ಹಕ್ಕನ್ನು ಹಿಂಪಡೆಯಬೇಕು" - ಶಿವಸೇನೆ "ಭಾರತವು ಹಿಂದುಗಳ ರಾಷ್ಟ್ರ, ಮುಸ್ಲಿಂಮರಿಗೆ ಜಾಗವಿಲ್ಲ" - ಮೋಹನ್ ಭಾಗವತ್ "ಹಿಂದು ಯುವಕರು ಮುಸ್ಲಿಂ ಯುವತಿಯರನ್ನು ಮತಾಂತರ ಮಾಡಿ ಅವರನ್ನು ಮದುವೆಯಾಗಬೇಕು" - ಯೋಗಿ ಆದಿತ್ಯನಾಥ್ "ಹಿಮಾಚಲ ಪ್ರದೇಶವನ್ನು ಹಿಂದು ರಾಜ್ಯವೆಂದು ನಾಮಕರಣ ಮಾಡಬೇಕು" - ವಿ.ಎಚ್.ಪಿ "ಹಿಂದುಗಳು ಖಾನ್ ಗಳ ಸಿನಿಮಾ ನೋಡೋದು ನಿಲ್ಲಿಸಬೇಕು" - ಸ್ವಾದಿ ಪ್ರಾಚಿ "ಯಾರಿಗಾದರೂ ಬೀಫ್ ತಿನ್ನುವ ಆಸೆಯಿದ್ದಲ್ಲಿ ಪಾಕಿಸ್ತಾನಕ್ಕೆ ತೆರಳಿ" - ನಖ್ವಿ "ಎ.ಆರ್ ರೆಹಮಾನ್ ಮತ್ತೆ ಹಿಂದು ಧರ್ಮಕ್ಕೆ ಮರಳಲಿ...