ನನ್ನ ಪ್ರೀತಿಯ ಗೆಳೆತಿ..💝 ಇದು ಮದುವೆಗೆ ಮುಂಚೆ ಬರೆದ ಪತ್ರ. ಹದಿನೈದು ವರ್ಷಗಳ ಅವಳ ನನ್ನ ಪ್ರೇಮ ಕಹಾನಿ ಇಂದಿಗೆ ಹಳಸಿದೆ ಮುಗಿದ ಕಥೆ. ಆದರೆ ಅವೆಲ್ಲಾ ಮರೆಯಲಾಗದ ಮಧುರ ಕ್ಷಣಗಳು. ತಿಳಿದು ತಿಳಿಯದೆ ನಾ ಮಾಡಿದ ತಪ್ಪು ನನ್ನ ಪ್ರೀತಿಯನ್ನು ಕಸಿದು ಕೊಂಡಿತ್ತು. ನಿಜವಾದ ಪ್ರೀತಿ ಏನು ಎಂದು ತಿಳಿಯದ ವಯಸ್ಸದು ಅದು ಆಕರ್ಷಣೆ ಇರಬಹುದು.ಅವಳು ನನ್ನ ತುಂಬಾ ಪ್ರೀತಿಸುವುದು ಆಮೇಲೆ ತಿಳಿತು. ಈಗ ಅವಳಿಗೆ ಮದುವೆ ಆಗಿದೆ, ಮುದ್ದಾದ ಮಗು ಕೂಡ ಇದೆ.ಅವಳು ನನ್ನ ನೆನಪಿನಲ್ಲಿ ನಾ ಇಲ್ಲ. ಅವಳಿಗೆ ಹೇಳಲೇ ಬೇಕಾದ ಒಂದು ಮಾತು.. ನನ್ನ ಕ್ಷಮಿಸು...